ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ (27-02-2002 -01-03-2002) “ಪನ್ನೀರು” ಸ್ಮರಣ ಸಂಚಿಕೆಯಿಂದ ಆಯ್ದ ಭಾಗ
ಪರ್ಲತ್ತಾಯ ಪ್ರತಿಷ್ಠಾನದ ಉಗಮ “ಶ್ರೀಮದನಂತಪದ್ಮನಾಭೋವಿಜಯತೇ”
Our Mission

ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ (27-02-2002 -01-03-2002) “ಪನ್ನೀರು” ಸ್ಮರಣ ಸಂಚಿಕೆಯಿಂದ ಆಯ್ದ ಭಾಗ…(ಆಗಿನ ಅಧ್ಯಕ್ಷರು ಕುಲ ಬಾಂಧವರಿಗೆ ಬರೆದ ಪತ್ರ)
__________________________________________________
ಎನ್. ಸುಬ್ಬರಾವ್ 15-7-385
ಅಧ್ಯಕ್ಷರು ಕದ್ರಿ ರಸ್ತೆ, ಮಂಗಳೂರು- 575 003
ಪರ್ಲತ್ತಾಯ ಫೇಮಿಲಿ ಟ್ರಸ್ಟ್ (ರಿ) ಫೊನ್::444567
ತಾ : 15-9-97
ಪ್ರಿಯ ಪರ್ಲತ್ತಾಯ ಕುಲಸಂಜಾತ ಬಾಂಧವರೇ,
ಆ
ನನ್ನ ಹಾಗೂ ನನ್ನ ಕುಟುಂಬದ ಮತ್ತು ಪರ್ಲತ್ತಾಯ ಫೇಮಿಲಿ ಟ್ರಸ್ಟ್(ರಿ)ನ ಬೋರ್ಡ್ ಆಫ್ ಟ್ರಸ್ಟೀಸ್‌ನ ಸಂಘಟಕರ ಪರವಾಗಿಯೂ ನಿಮಗೆ ಶುಭಾಶಯಗಳು.
ಈ ಚಿಕ್ಕಪುಸ್ತಕವು ಪರ್ಲತ್ತಾಯ ಫೇಮಿಲಿ ಟ್ರಸ್ಟ್ (ರಿ.) ಇದರ ಸಮಗ್ರ ಪರಿಚಯ, ಸಂವಿಧಾನ ಹಾಗೂ ನಿಯಮಾವಳಿಗಳನ್ನು ಒಳಗೊಂಡಿದೆ. ಇದನ್ನು ನೀವು ಆಮೂಲಾಗ್ರವಾಗಿ ಓದಿ ಮನನ ಮಾಡಿಕೊಂಡು, ಟ್ರಸ್ಟನ್ನು ಸಂಘಟಿಸಿದ ಉದ್ದೇಶವನ್ನು ಸಫಲಗೊಳಿಸುವಲ್ಲಿ ನೀವು ಮತ್ತು ನಿಮ್ಮ ಕುಟುಂಬದವರು ಹೇಗೆ ಸಕ್ರಿಯವಾಗಿ ಪಾಲ್ಗೊಳ್ಳಬಹುದೆಂಬುದನ್ನು ನೀವು ನಿರ್ಧರಿಸಿದರೆ ತುಂಬಾ ಸಂತೋಷ
ಈ ಟ್ರಸ್ಟನ್ನು ಸಂಘಟಿಸಿದ ನಮ್ಮ ಮೂಲೋದ್ದೇಶವು:-
(ಅ) ಈಗ ಸಂಪೂರ್ಣ ಜೀರ್ಣಗೊಂಡು ಶಿಥಿಲವಾಗಿರುವ, ಪುತ್ತೂರು ತಾಲೂಕು, ರಾಮಕುಂಜ ಗ್ರಾಮದಲ್ಲಿರುವ, ನಮ್ಮ ಕುಲದೇವಸ್ಥಾನವಾದ ಕೊಂದಪ್ಪಡೆ ಶ್ರೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಕೂಡಲೇ ಕೈಗೊಳ್ಳುವುದಾಗಿದೆ. ಇದರ ಸಫಲತೆಗಾಗಿ ಉದಾರ ನೆರವು ಹಾಗೂ ಹೃತ್ತೂರ್ವಕ ಸಹಕಾರವನ್ನು ನಿಮ್ಮೆಲ್ಲರಿಂದ ನಿರೀಕ್ಷಿಸುತ್ತಿದ್ದೇನೆ.
(ಆ) ಅಲ್ಲಲ್ಲಿ ಹರಡಿ ಹಂಚಿಕೊಂಡಿರುವ ಪರ್ಲತ್ತಾಯ ಕುಲಸಂಜಾತ ಸದಸ್ಯರು ಪರಸ್ಪರರನ್ನು ಗುರುತಿಸಿ, ಅರಿತುಕೊಳ್ಳುವುದು ಹಾಗೂ ಕಷ್ಟಕಾರ್ಪಣ್ಯಗಳಲ್ಲಿ ಒಬ್ಬರಿಗೊಬ್ಬರು ನೆರವಾಗುವುದು.
ಟ್ರಸ್ಟಿನ ಮೇಲ್ಕಂಡ ಮೂಲ ಉದ್ದೇಶಗಳಿಗೆ ಪೂರಕವಾಗಿ ತಮ್ಮ ಸಲಹೆ ಸೂಚನೆಗಳನ್ನು ನನಗೆ ಬರೆದು ತಿಳಿಸಬೇಕಾಗಿ ಅಪೇಕ್ಷಿಸುತ್ತೇನೆ. ನಮ್ಮ ಸಂಘಟನೆಯ ಪದಾಧಿಕಾರಿಗಳೂ ನಿಮ್ಮನ್ನು ಪ್ರತ್ಯೇಕವಾಗಿ ಸದ್ಯದಲ್ಲೇ ಭೇಟಿಯಾಗಲಿರುವರು. ನಮ್ಮ ಈ ಸಂಘಟನೆಯ ಉದ್ದೇಶ ಸಾಧನೆಗಾಗಿ ಮತ್ತು ಅದರ ಸಫಲತೆಗಾಗಿ ತಮ್ಮೆಲ್ಲರಿಂದಲೂ ಹೃತ್ತೂರ್ವಕ, ಉದಾರ ಸಹಕಾರವನ್ನು ನಿರೀಕ್ಷಿಸುತ್ತೇನೆ.
ಕೊಂದಪ್ಪಡೆ ಶ್ರೀ ಅನಂತಪದ್ಮನಾಭ ಸ್ವಾಮಿಯ ಪೂರ್ಣಾನುಗ್ರಹ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಮೇಲಿರಲೆಂದು ಪ್ರಾರ್ಥಿಸುವ,
ನಿಮ್ಮವ,
(ಎನ್. ಸುಬ್ಬರಾವ್)
ಅಧ್ಯಕ್ಷರು
________________________________________________________________________________
N. SUBBA RAO, 15-7-385,
President, Kadri Road,
Parlathaya Family Trust (Regd) Mangalore-575 003.
Phone No.: 444567