About Parlathaya Prathishtana

demo-attachment-729-Shape
demo-attachment-728-Leaf-1

(ಹಳೆಯ ದೇಗುಲ)                    

(ಹೊಸ ದೇಗುಲ )                                                        

ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ (27-02-2002 -01-03-2002) “ಪನ್ನೀರು”  ಸ್ಮರಣ ಸಂಚಿಕೆಯಿಂದ ಆಯ್ದ ಭಾಗ…

  

ಸುಮಾರು ಹದಿನೈದು  ವರ್ಷಗಳ ಹಿಂದಿನ ಮಾತು. ಪರ್ಲತ್ತಾಯ ಪ್ರತಿಷ್ಠಾನದ ಆದ್ಯಾ ಪ್ರವರ್ತಕರಲ್ಲೊಬ್ಬರಾದ ಮಂಗಳೂರಿನ ವಕೀಲ ಶ್ರೀ ಆರ್. ನಾರಾಯಣ ಆಚಾರ್ಯರುಉಡುಪಿಯ ಕಡಿಯಾಳಿ ದೇವಸ್ಥಾನ ಸಂದರ್ಶಿಸಿದ ಅದೊಂದು ಸಂದರ್ಭದಲ್ಲಿಪರ್ಲತ್ತಾಯ ವಂಶದ ಹಿರಿಯರೊಬ್ಬರು ಆತನ ಬಳಿಗೆ ಬಂದುಮಾತನಾಡಿಸಿ, “ಶ್ರೀಮದನಂತಪದ್ಮನಾಭನ ಪೂರ್ಣಾನುಗ್ರಹ ನಿನ್ನ ಮೇಲಿರಲಿ” ಎಂದು ಹರಸಿದರು. ನಾರಾಯಣ ಆಚಾರ್ಯರಿಗೆ ಆ ವೃದ್ಧರ ಪರಿಚಯ ಇರದಿದ್ದರೂವೃದ್ಧರಿಗೆ ನಾರಾಯಣ ಆಚಾರ್ಯರ ಬಗ್ಗೆ ಪೂರ್ಣ ತಿಳಿದಿತ್ತು.

 

ಕಡಿಯಾಳಿ ದೇವಸ್ಥಾನದಲ್ಲಿದ್ದಾಗಮಹೀಶಮರ್ದಿನಿ ದೇವಿಯ ಅನುಗ್ರಹವಿರಲಿ ಎಂದು ಹರಸದೆ,  ಅನಂತಪದ್ಮನಾಭನ ಪೂರ್ಣಾನುಗ್ರಹವಿರಲಿ ಎಂದು ಹರಸಲು ಕಾರಣವೇನೆಂದು ತಿಳಿಯದೆನಮಗೂ ಅನಂತಪದ್ಮನಾಭನಿಗೂ ಏನು ಸಂಬಂಧ ಎಂದು ನನ್ನಲ್ಲಿ ವಿಚಾರಿಸಿದಾಗನಮ್ಮಎಂದರೆ ಪರ್ಲತ್ತಾಯ ವಂಶದವರ ಕುಲದೇವರು ಶ್ರೀ ಅನಂತಪದ್ಮನಾಭ. ಆ ದೇವಸ್ಥಾನ ಪುತ್ತೂರು ತಾಲೂಕುರಾಮಕುಂಜ ಗ್ರಾಮದ ಸಂಪ್ಯಾಡಿ ಬಳಿಯ ಕೊಂದಪ್ಪಾಡಿ ಎಂಬಲ್ಲಿದೆ. ಈ ದೇವಸ್ಥಾನವು ಸಂಪೂರ್ಣ ಜೀರ್ಣಾವಸ್ಥೆಯಲ್ಲಿದ್ದು ನಿತ್ಯಪೂಜೆ ಮಾತ್ರ ನಡೆಯುತ್ತಿದೆ ಎಂದು ನನಗೆ ತಿಳಿದಷ್ಟು ವಿವರಿಸಿದೆ. ಅಂದಿನಿಂದಲೇ ಈ ದೇವಸ್ಥಾನದ ಪುನರ್ನಿರ್ಮಾಣದ ಬಗ್ಗೆ ಶ್ರೀ ನಾರಾಯಣ ಆಚಾರ್ಯರು ಕನಸು ಕಾಣತೊಡಗಿದರು.

 

ಇದೇ ಸಮಯದಲ್ಲಿಕಿನ್ನಿಗೋಳಿಯ ರಾಷ್ಟ್ರಪ್ರಶಸ್ತಿ ವಿಜೇತ ಅಧ್ಯಾಪಕ ಶ್ರೀ ಕೆ. ಬಾಲಕೃಷ್ಣ ಆಚಾರ್ಯರುಪರ್ಲತ್ತಾಯ ವಂಶದ ಹಾಗೂ ಕುಲದೇವರ ಬಗ್ಗೆ ಅವಿರತ ಸಂಶೋಧನೆಯಿಂದ ಮಾಹಿತಿಯನ್ನು ಕಲೆಹಾಕಿವಂಶವೃಕ್ಷವನ್ನು ತಯಾರಿಸುವ ಬೃಹತ್ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರುಹಾಗೂ ಅದೇ ಕಾಲಕ್ಕೆ ಅಲೆವೂರು ಕುಟುಂಬದವರು ಪ್ರಾಯೋಗಿಕವಾಗಿ ಪ್ರಥಮವಾಗಿ 1996ರಲ್ಲಿ ಪರ್ಲತ್ತಾಯ ಕುಟುಂಬದ ಸಮಾವೇಶವನ್ನು ಜರುಗಿಸಿದರು. ಇದರಿಂದ ಕೊಂದಪ್ಪಡೆಯ ಶ್ರೀ ಅನಂತಪದ್ಮನಾಭನ ಮಂದಿರದ ಜೀರ್ಣೋದ್ಧಾರದ ಬಗ್ಗೆ ವಂಶಸ್ಥರಿಂದ ಹೆಚ್ಚಿನ ಕಳಕಳಿಯು ವೇದ್ಯವಾಯಿತು. 1997ರಲ್ಲಿ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ವಂಶಸ್ಥರ 2ನೇ ಸಮಾವೇಶದಲ್ಲಿ ಈ ಬಗ್ಗೆ ಒಮ್ಮತದ ಅಭಿಪ್ರಾಯವು ಪ್ರಕಟವಾಗಿ ಒಂದು ಸಮಿತಿಯನ್ನು ನೇಮಿಸಲಾಯಿತು. ಈ ಸಮಿತಿಯು ಕೂಡಲೇ ಮಂಗಳೂರಿನಲ್ಲಿ ಸಭೆ ಸೇರಿ “ಪರ್ಲತ್ತಾಯ ಫೇಮಿಲಿ ಟ್ರಸ್ಟ್” ಒಂದನ್ನು ರಚಿತವಾಯಿತು. ಹಾಗೂ ಪದಾಧಿಕಾರಿಗಳ ನೇಮಕವಾಯಿತು. ಪ್ರಧಾನ ಮೂಲೋದ್ದೇಶವಾಗಿದೇವಸ್ಥಾನದ ಜೀರ್ಣೋದ್ಧಾರ ಕೆಲಸವೆಂದು ಪರಿಗಣಿಸಲಾಯಿತು. ಶ್ರೀಯುತ ನಾರಾಯಣ ಆಚಾರ್ಯರು ಹಾಗೂ ಉಡುಪಿಯ ವಕೀಲರಾದ ಶ್ರೀ ಎ. ಶ್ರೀಪತಿ ಆಚಾರ್ಯರು ಈ ಟ್ರಸ್ಟಿನ ಘಟನಾವಳಿಯನ್ನು ಸಿದ್ಧಪಡಿಸಿಅದನ್ನು ಕ್ರಮಬದ್ಧವಾಗಿ ನೊಂದಾಯಿಸಲಾಯಿತು. ಈ ಎಲ್ಲಾ ಸಂದರ್ಭಗಳಿಂದ ದೇವಸ್ಥಾನದ ಪುನನಿರ್ಮಾಣದ ಯೋಜನೆಗೆ ಇನ್ನಷ್ಟು ಹುರುಪು ದೊರೆಯಿತು.

 

ಮುಂದಕ್ಕೆಪ್ರತಿವರ್ಷವೂ ಪರ್ಲತ್ತಾಯ ವಂಶಸ್ಥರ ಸಮಾವೇಶವನ್ನು ಏರ್ಪಡಿಸಲಾಗುತ್ತಿದ್ದುಈ ಎಲ್ಲಾ ಸಂದರ್ಭಗಳಲ್ಲೂ ಜೀರ್ಣೋದ್ಧಾರದ ಬಗ್ಗೆ ಚರ್ಚೆ ನಡೆದುದೇಣಿಗೆಯ ಬಗ್ಗೆ ವಿಜ್ಞಾಪನೆಯನ್ನು ಹೊರಡಿಸಿನಿಧಿಸಂಗ್ರಹ ಆರಂಭಿಸಲಾಯಿತು. ಅಂತಿಮವಾಗಿ ಕಳೆದ ವಿಜಯದಶಮಿ(26.10.2001) ಶುಭದಿನದಂದುದೇವಸ್ಥಾನದ ಪುನನಿರ್ಮಾಣದ ಮಹತ್ಕಾರ್ಯವನ್ನು ಆರಂಭಿಸುವಉದ್ದೇಶದಿಂದವಿಧಿವತ್ತಾಗಿ ಅನುಜ್ಞಾಕಲಶದ ಕಾರ್ಯಕ್ರಮವು ನಡೆಯಿತು. ಮುಂದೆ ತಾ. 17.11.2001ರಂದು ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರ ದಿವ್ಯ ಹಸ್ತದಿಂದ ಪುನನಿರ್ಮಾಣದ ಶಿಲಾನ್ಯಾಸವನ್ನು ವಿದ್ಯುಕ್ತವಾಗಿ ಮಾಡಲಾಯಿತು. ಕಾರ್ಕಳದ ಅನುಭವಿ ಶಿಲ್ಪಿ ಶ್ರೀ ರಾಜೇಂದ್ರರಿಂದ ಮಂದಿರದ ಕಲ್ಲಿನ ಕೆಲಸವೂಕೇರಳದ ಕಾಷ್ಠ ಶಿಲ್ಪಿ ಶ್ರೀ ಎ. ಆರ್. ಶಂಕರನ್‌ರಿಂದ ದೇವಳದ ಮರದ ಕೆಲಸವೂ ಶ್ರಾಸ್ರೋಕ್ತವಾಗಿ ನಡೆಯಿತು.

 

ಇದೀಗ ನಮ್ಮ ಆರಾಧ್ಯ ದೇವತೆ ಶ್ರೀಮದನಂತಪದ್ಮನಾಭನ ನವ್ಯಭವ್ಯಗುಡಿ ನಮ್ಮ ಮುಂದಿದೆ. ಶ್ರೀ ದೇವರು ಇಲ್ಲಿ ಸಂಪೂರ್ಣ ಸಾನಿಧ್ಯದೊಂದಿಗೆ ನೆಲಸಿನಮ್ಮೆಲ್ಲರನ್ನು ಚಿರಕಾಲ ಹರಸುತ್ತಿರಲಿ ಎಂದು ನನ್ನ ಪ್ರಾರ್ಥನೆ. ಈ ಕನಸನ್ನು ಸಾಕಾರಗೊಳಿಸುವಲ್ಲಿ ತನುಮನಧನಗಳಿಂದ ಸಹಕರಿಸಿದ ಪ್ರತಿಷ್ಠಾನದ ಪದಾಧಿಕಾರಿಗಳುಕುಲಬಾಂಧವರು ಭಕ್ತಾಭಿಮಾನಿಗಳುಗ್ರಾಮಸ್ಥರುಹಗಲು-ರಾತ್ರಿ ದುಡಿದ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳೂ ಹಾಗೂ ಸ್ವಯಂ ಸೇವಕರು ಇವರನ್ನೆಲ್ಲರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡು ವಿಶೇಷ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

 

ಶ್ರೀ ಅನಂತಪದ್ಮನಾಭನು ಎಲ್ಲರಿಗೂ ಸನ್ಮಂಗಳವನ್ನು ನೀಡಲಿ.

ಲೇಖಕರು..

ದಿ׀. ಎನ್. ಸುಬ್ಬರಾವ್

(ಮಾಜಿ ಅಧ್ಯಕ್ಷರು)

ಪರ್ಲತ್ತಾಯ ಪ್ರತಿಷ್ಠಾನಮಂಗಳೂರು